KTV Association Description
ಕನ್ನಡ ಕಿರುತೆರೆರಂಗದಲ್ಲಿರುವ ಕಲಾವಿದರು ತಂತ್ರಜ್ಞರು ಎಲ್ಲರ ಹಿತ ಕಾಯುವ ಉದ್ದೇಶದಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ. ಸಂಘಟನೆಯನ್ನು ಬಲಪಡಿಸಲು ಪ್ರಸ್ತುತ ತಂತ್ರಜ್ಞಾನದಲ್ಲಿ ಇರುವ ಹೇರಳ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ಈ ಕೆಟಿವಿಎ ಆಪ್ ಆರಂಭಿಸಲಾಗುತ್ತಿದೆ.
ಕನ್ನಡದ ಹಿರಿತೆರೆ ಉದ್ಯಮಕ್ಕಿಂತ ಹೆಚ್ಚಾಗಿ ಕಿರುತೆರೆಯನ್ನೇ ಹೆಚ್ಚು ಜನ ಕಲಾವಿದರು ತಂತ್ರಜ್ಞರು ಆಶ್ರಯಿಸಿದ್ದಾರೆ. ವ್ಯಾಪಾರದ ದೃಷ್ಟಿಯಿಂದ ಕೂಡಾ ಹಿರಿತೆರೆಗಿಂತ ಕಿರುತೆರೆ ಹೆಚ್ಚು ವಿಸ್ತಾರಗೊಂಡಿದೆ. ಆದರೆ ಈ ಉದ್ಯಮವು ಅಸಂಘಟಿತ ವಲಯದಲ್ಲಿ ಇದ್ದುದದರಿಂದ ಈ ರಂಗವನ್ನೇ ನೆಚ್ಚಿಕೊಂಡಿದ್ದ ಪ್ರತಿಯೊಬ್ಬರೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಾರಿಗಾದರೂ ತೊಂದರೆಯಾದರೆ ನೆರವಿಗೆ ಧಾವಿಸುವುದಕ್ಕಾಗಲೀ, ಸರ್ಕಾರದಿಂದ ಸವಲತ್ತುಗಳನ್ನು ಪಡೆಯುವುದಕ್ಕಾಗಲೀ, ಸೂಕ್ತ ಸಮಯದಲ್ಲಿ ವಿಮೆ ಮತ್ತು ವೈದ್ಯಕೀಯ ನೆರವುಗಳನ್ನು ಪಡೆಯುವುದಕ್ಕಾಗಲೀ, ಉದ್ಯಮದ ಆಗುಹೋಗುಗಳ ಕುರಿತು ಸಮಗ್ರವಾಗಿ ಎಲ್ಲರೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಲೀ... ಸೂಕ್ತ ಮಾಧ್ಯಮದ ಕೊರತೆ ಇದೆ.
ಹೀಗಾಗಿ ಕನ್ನಡ ಕಿರುತೆರೆ ರಂಗದ ಎಲ್ಲರ ಕ್ಷೇಮಾಭಿವೃದ್ದಿಗಾಗಿ ಮತ್ತು ಸೂಕ್ತ ಸಂವಹನಕ್ಕಾಗಿ ಈ ಕೆಟಿವಿಎ ಆಪ್ ರೂಪುಗೊಳ್ಳುತ್ತಿದೆ.

Open up